+918048032078
Currently it only shows your basic business info. Start adding relevant business details such as description, images and products or services to gain your customers attention by using Boost 360 android app / iOS App / web portal.
ಕಡಿಮೆ ಹಣ.. ಸರ್ವರೋಗಗಳಿಗೂ ರಾಮಬಾಣ.. ಇದು ಹೋಮಿಯೋಪತಿ ವಿಧಾನ ́ಊಟ ಬಲ್ಲವಿನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ́ ಎಂಬ ಗಾದೆ ಮಾತಿದೆ. ನಿಜ ಇವತ್ತು ಆಹಾರದ ಕಾರಣಗಳಿಂದಾಗಿಯೇ ಮನುಷ್ಯ ನಾನಾರೋಗಗಳಿಗೆ ತುತ್ತಾಗುತ್ತಿದ್ದಾನೆ. ಅನುವಂಶಿಕ ಕಾರಣ, ಪರಿಸರ ಮಾಲಿನ್ಯ, ಸಾಂಕ್ರಾಮಿಕ ಸೋಂಕುಗಳಿಂದಾಗಿಯು ಜನ ಕಾಯಿಲೆಗಳಿಗೆ ಸಿಲುಕುತ್ತಿದ್ದಾರೆ. ಇಂದಿನ ಆಧುನಿಕ, ಒತ್ತಡದ ಜೀವನಶೈಲಿಯಿಂದಾಗಿ ಆನೇಕ ದೈಹಿಕ, ಮಾನಸಿಕ ಸಮಸ್ಯೆಗಳು ಮನುಷ್ಯನನ್ನು ಬಾಧಿಸುತ್ತಿವೆ. ಪ್ರತಿಯೊಂದು ಮನೆಯಲ್ಲೂ ಒಬ್ಬರಿಗಲ್ಲ ಒಬ್ಬರಿಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳಿರುತ್ತವೆ. ಕೆಲವೊಂದು ತಾತ್ಕಾಲಿಕವಾಗಿ ಬಂದುಹೋಗುವ ಕಾಯಿಲೆಗಳಾಗಿದ್ದರೆ, ಮತ್ತೆ ಕೆಲವು ಜೀವನಪೂರ್ತಿ ಔಷಧಿ ಪಡೆಯುವ ಕಾಯಿಲೆಗಳಾಗಿರುತ್ತವೆ. ಇಂದಿನ ದಿನಗಳಲ್ಲಿ ಯಾರಿಗೆ ಆದರೂ ಜ್ವರ, ನೆಗಡಿ, ಕೆಮ್ಮು, ಶೀತ, ತಲೆನೋವು, ಮೈಕೈ ನೋವು ಹೀಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಂಡು ಬಂದರೂ ಥಟ್ ಅಂತಾ ನೆನಪಾಗೋದು ಇಂಗ್ಲಿಷ್ ಮೆಡಿಸಿನ್. ಬಹುಪಾಲು ಮಂದಿ ಖಾಸಗಿ ಆಸ್ಪತ್ರೆಗಳಿಗೆ ಮುಗಿಬೀಳುತ್ತಾರೆ. ಇನ್ನು ದೊಡ್ಡ ದೊಡ್ಡ ರೋಗಗಳು ಬಂದರಂತೂ ದೊಡ್ಡ ದೊಡ್ಡ ಆಸ್ಪತರೆಗಳಿಗೆ ಹೋಗಿ ಚಿಕಿತ್ಸೆಗಾಗಿ ಲಕ್ಷ ಲಕ್ಷ ಹಣ ಸುರಿಯುತ್ತಾರೆ. ಆದರೆ ಸ್ವಾಭಾವಿಕ ಚಿಕಿತ್ಸೆಯ ಮೂಲ ತತ್ವವಾದ ಆಯುರ್ವೇದ, ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ ಯಾರಿಗೂ ನೆನಪಾಗುವುದಿಲ್ಲ. ಇಂದು ನಮಗೆ ಬೇಕಾಗಿರುವುದು ರೋಗಮುಕ್ತ ಜೀವನಶೈಲಿ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದ ಹಾಗೆ ತಡೆಯುವುದು ಬಹಳ ಮುಖ್ಯ. ನಮ್ಮನ್ನು ಬಾಧಿಸುತ್ತಿರುವ ಕಾಯಿಲೆಗಳನ್ನು ನಾವು ಪಡೆಯುವ ಔಷಧಿಗಳಿಂದ ಯಾವುದೇ ಅಡ್ಡ ಪರಿಣಾಮಗಳಾಗದಂತೆ ಗುಣಪಡಿಸಿಕೊಳ್ಳವುದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿ ಚಮತ್ಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ. ಮನುಷ್ಯನ ದೇಹವನ್ನು ಸ್ವಸ್ಥವಾಗಿಡಲು, ಯಾವುದೇ ಕಾಯಿಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವಲ್ಲಿ ಶತ ಶತಮಾನಗಳ ಇತಿಹಾಸವಿರುವ ಹೋಮಿಯೋಪತಿ ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ವೈದ್ಯಕೀಯ ರಂಗದಲ್ಲಿ ಹೋಮಿಯೋಪತಿ ಕ್ರಾಂತಿ ವಿಶ್ವದೆಲ್ಲೆಡೆ ಇಂದು ಹೋಮಿಯೋಪಥಿ ಚಿಕಿತ್ಸೆ ಪ್ರವರ್ಧಮಾನಕ್ಕೆ ಬಂದಿದೆ. ನೈಸರ್ಗಿಕ ಚಿಕಿತ್ಸಾ ವಿಧಾನದತ್ತ ಜನ ವಾಲುತ್ತಿದ್ದಾರೆ. ಹಿಂಸಾತ್ಮಕವಲ್ಲದ, ರಾಸಾಯನಿಕ ಔಷಧಿಗಳಿಂದ ದೇಹವನ್ನು ಜರ್ಜರಿತಗೊಳಿಸದ, ಒಂದು ರೋಗ ಗುಣಪಡಿಸಿ ಮತ್ತೊಂದು ಕಾಯಿಲೆಗೆ ದಾರಿಮಾಡಿಕೊಡದಿರುವ, ಪ್ರಕೃತಿದತ್ತವಾದ ಔಷಧಿಗಳಿಂದ ವಾಸಿಮಾಡಬಹುದಾದ ಚಿಕಿತ್ಸಾ ವಿಧಾನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಪೈಕಿ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಸಾಂಪ್ರದಾಯಿಕ ಔಷಧ ಪದ್ಧತಿಗೆ ಸಾಂಸ್ಥಿಕ ರೂಪ ಅಲೋಪತಿ, ಯುನಾನಿ ಮುಂತಾದ ಆಧುನಿಕ ಚಿಕಿತ್ಸಾ ವಿಧಾನಗಳು ಬರುವುದಕ್ಕಿಂತ ಮೊದಲು ಪುರಾತನ ಕಾಲದಿಂದಲೂ ರೂಢಿಗತವಾಗಿ ಬಂದಿರುವುದು ನೈಸರ್ಗಿಕ ಗಿಡಮೂಲಿಕೆಗಳಿಂದ ಚಿಕಿತ್ಸೆ ನೀಡುವ ಆಯುರ್ವೇದ ಪದ್ಧತಿ. ಈಗಲೂ ಸಾಕಷ್ಟು ಮಂದಿ ಸಾಂಪ್ರದಾಯಿಕ ಮನೆ ಮದ್ದುಗಳನ್ನು ಬಳಸುತ್ತಾರೆ. ಇದಕ್ಕೆ ಪರ್ಯಾಯವೆಂಬಂತೆ ಪ್ರಾಕೃತಿಕ ಹಿನ್ನೆಲೆಯಲ್ಲೇ ಆಯುರ್ವೇದಕ್ಕಿಂತ ವಿಭಿನ್ನವಾಗಿ, ಕರಾರುವಕ್ಕಾಗಿ, ಪರಿಣಾಮಕಾರಿಯಾಗಿ ಹೋಮಿಯೋಪತಿ ಚಿಕಿತ್ಸೆ ಖ್ಯಾತಿ ಪಡೆದಿದೆ. ಜರ್ಮನಿಯ ಚಿಕಿತ್ಸಾ ವಿಧಾನವಾಗಿರುವಂತಹ ಹೋಮಿಯೋಪತಿ ಇಂದು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈಗಾಗಲೇ ಹೋಮಿಯೋಪಥಿ ಸಾಂಸ್ಥಿಕ ರೂಪ ಪಡೆದುಕೊಂಡು ವಿಸ್ತಾರವಾಗಿ ಬೆಳೆದಿದೆ. ವಿಶ್ವದಲ್ಲಿ ಹೋಮಿಯೋಪತಿ ಅತೀ ಹೆಚ್ಚು ಬಳಸಲ್ಪಡುವ ಚಿಕಿತ್ಸಾ ವಿಧಾನವಾಗಿದೆ. ಕಡಿಮೆ ಖರ್ಚು, ಸರಳ ವಿಧಾನ, ಪರಿಣಾಮಕಾರಿ ಹೋಮಿಯೋಪತಿ ಕಡಿಮೆ ಖರ್ಚಿನಲ್ಲಿ ಪಡೆಯುವಂತಹ ಚಿಕಿತ್ಸಾ ವಿಧಾನವಾಗಿದೆ. ಇದು ಅತ್ಯಂತ ಸುರಕ್ಷಿತವೂ ಪರಿಣಾಮಕಾರಿಯೂ ಆಗಿದೆ. ಗರ್ಭಿಣಿಯರು, ಮಕ್ಕಳು, ವೃದ್ಧರು ಎಲ್ಲರಿಗೂ ಸುರಕ್ಷಿತವಾಗಿದೆ. ಇದರಿಂದ ಬೇರೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ರೋಗ ವಾಸಿಮಾಡುವಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಹೋಮಿಯೋಪಥಿ ಔಷಧಿ ಸಣ್ಣ ಸಿಹಿ ಗುಳಿಗೆಗಳು, ಸಣ್ಣ ಮಾತ್ರೆಗಳು ಅಥವಾ ಪೌಡರ್ ರೂಪದಲ್ಲಿ ಇರುವುದರಿಂದ ಸಣ್ಣ ಮಕ್ಕಳಿಗೆ ನೀಡುವುದ ಸುಲಭ. ಈ ಔಷಧಗಳನ್ನು ಬೇರೆ ಬೇರೆ ಔಷಧಗಳ ಜತೆಯೂ ಸೇವಿಸಬಹುದು. ಕೆಲವು ಗಿಡಮೂಲಿಕೆ, ಬೇರು, ಸಸ್ಯ, ಪ್ರಾಣಿ, ಕೀಟ ಇತ್ಯಾದಿಗಳಿಂದ ಮಾಡಲ್ಪಟ್ಟಿರುತ್ತದೆ. ಹೀಗಾಗಿ ಬೇರೆ ಔಷಧಿಗಳ ಜತೆ ಬೆರೆಯುವುದಿಲ್ಲ. ಬೇರೆ ಔಷಧಿಗಳ ಜತೆ ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ. ಇದು ಕೇವಲ ರೋಗವನ್ನು ಪರಿಹಾರ ಮಾಡುವುದು ಮಾತ್ರವಲ್ಲ ಸಂಪೂರ್ಣ ಬುಡದಿಂದಲೇ ತೊಡೆದುಹಾಕಲು ನೆರವಾಗುತ್ತದೆ. ರೋಗವನ್ನು ಬೇರು ಸಮೇತ ಕಿತ್ತುಹಾಕುತ್ತದೆ ಲೋಹವನ್ನು ಲೋಹದಿಂದಲೇ ಕತ್ತರಿಸಬೇಕು ಅಂದರೇ ಸಮಾನವಾದುದು ಸಮಾನವಾದುದರಿಂದಲೇ ಗುಣಮುಖವಾಗುತ್ತದೆ ಎಂಬುದು ಹೋಮಿಯೋಪತಿಯ ಮೂಲ ನಿಯಮ. ದೇಹದಿಂದ ರೋಗ ಪೀಡಿತ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಇದು ನಾಶಪಡಿಸುತ್ತದೆ. ರೋಗವನ್ನು ಬೇರು ಸಮೇತ ಕಿತ್ತುಹಾಕುವುದು ಈ ಪದ್ಧತಿಯ ಕ್ರಮ. ಹೋಮಿಯೋಪಥತಿ ಮೂಲಕ ನಾವು ಅನೇಕ ಕಾಯಿಲೆಗಳನ್ನು ದೂರಮಾಡಿಕೊಳ್ಳಬಹುದಾಗಿದೆ. ನಂದಿ ಹೋಮಿಯೋಪತಿ ಅದ್ವಿತೀಯ ಸಾಧನೆ ಕರ್ನಾಟಕದಲ್ಲಿ ಹಲವಾರು ಹೋಮಿಯೋಪತಿಕ್ ಕ್ಲಿನಿಕ್ ಗಳಿವೆ, ಚಿಕಿತ್ಸಾ ಕೇಂದ್ರಗಳಿವೆ. ಅವುಗಳ ಪೈಕಿ ಕೈಗೆಟುಕುವ ದರದಲ್ಲಿ, ನುರಿತ ವೈದ್ಯರಿಂದ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ನಂದಿ ಹೋಮಿಯೋಪತಿ ಕೂಡ ಪ್ರಮುಖವಾದುದು. ಡಾ. ಸಂಜೀವಿನಿ ಹೂಗಾರ್ ದಂಪತಿ ನಡೆಸುತ್ತಿರುವ ನಂದಿ ಹೋಮಿಯೋಪತಿ ಕಳೆದ 15 ವರ್ಷಗಳಿಂದ ಸಹಸ್ರಾರು ರೋಗಿಗಳನ್ನು ಆರೋಗ್ಯವಂತರನ್ನಾಗಿ ಮಾಡಿದೆ. ಸುರಕ್ಷಿತ, ಗುಣಮಟ್ಟದ, ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ನೀಡಲಾಗುತ್ತದೆ. ಎಲ್ಲಿದೆ ನಂದಿ ಹೋಮಿಯೋಪತಿ ಕ್ಲಿನಿಕ್? ಯಾವೆಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ? ಬೆಂಗಳೂರಿನ ಎರಡು ಕಡೆ ನಂದಿ ಹೋಮಿಯೋಪತಿ (Nandi Homeopathy) ಕ್ಲಿನಿಕ್ ಶಾಖೆಗಳಿವೆ. ಬಸವನಗುಡಿಯ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ಒಂದು ಕ್ಲಿನಿಕ್, ಬಿಟಿಎಂ ಲೇಔಟ್ 2ನೇ ಹಂತದಲ್ಲಿ ಮತ್ತೊಂದು ಕ್ಲಿನಿಕ್ ಇದೆ. ನಂದಿ ಹೋಮಿಯೋಪತಿಯಲ್ಲಿ ಅತಿ ದೊಡ್ಡ ನಂದಿ ಹೋಮಿಯೋಪತಿ ಔಷಧಾಲಯವಿದ್ದು ಒಂದೇ ಸೂರಿನಡಿ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ಔಷಧಿಗಳು ರಿಯಾಯಿತಿ ದರದಲ್ಲಿ ಹಾಗೂ ತಯಾರಿಕ ವೆಚ್ಚದಲ್ಲಿ ದೊರೆಯುವ ಸೌಲಭ್ಯ ಕೂಡ ಇದೆ. ನಂದಿ ಹೋಮಿಯೋಪತಿ (Nandi Homeopathy) ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಲರ್ಜಿ, ಅಸ್ತಮಾ ಶಾಶ್ವತವಾಗಿ ನಿವಾರಣೆ ಅನುವಂಶಿಕವಾಗಿ, ಪರಿಸರದಿಂದ, ಸಾಕು ಪ್ರಾಣಿ, ಪಕ್ಷಿಗಳಿಂದ, ಕೆಲವು ಗಿಡಗಳಿಂದ, ಬಟ್ಟೆಗಳಿಂದ, ಆಭರಣಗಳಿಂದ ಕೆಲವೊಮ್ಮೆ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೈಹಿಕ ತೊಂದರೆಗಳು, ಇಸುಬು, ಚರ್ಮರೋಗಗಳು, ಮೊಡವೆ, ಕೂದಲು ಉದುರುವುದು, ಕಣ್ಣಿನ ಅಲರ್ಜಿ, ಸೋರಿಯಾಸಿಸ್, ಶ್ವಾಸಕೋಶದ ತೊಂದರೆಗಳು, ಅಸ್ತಮಾ, ಸೈನುಸೈಟಿಸ್, ಜೀರ್ಣಾಂಗಗಳ ಸಮಸ್ಯೆಗಳು, ಮಧುಮೇಹ, ಖಿನ್ನತೆ, ಬೆನ್ನು ನೂವು, ಹೈಪರ್ ಥೈರಾಯ್ಡ್, ಮೈಗ್ರೇನ್, ಮೂತ್ರದ ಸೋಂಕುಗಳು, ಪಿಸಿಒಡಿ, ವಿಟಲಿಗೋ, ನಿದ್ರಾಹೀನತೆ, ಬಾಯಿಹುಣ್ಣು, ಎದೆ ಉರಿ, ಹೊಟ್ಟೆಹುಣ್ಣು, ಮಲಬದ್ಧತೆ, ಅತಿಸಾರ ಇತ್ಯಾದಿ ತೊಂದರೆಗಳಿಗೆ ನಂದಿ ಹೋಮಿಯೋಪತಿಯಲ್ಲಿ(Nandi Homeopathy) ಚಿಕಿತ್ಸೆಯಿದ್ದು ಶಾಶ್ವತವಾಗಿ ಗುಣಪಡಿಸಬಹುದಾಗಿದೆ. ಥೈರಾಯ್ಡ್ ಸಮಸ್ಯೆಗೆ ಮುಕ್ತಿ, ಬಂಜೆತನಕ್ಕೂ ಚಿಕಿತ್ಸೆ ನಂದಿ ಹೋಮಿಯೋಪತಿಯಲ್ಲಿ ಥೈರಾಯ್ಡ್ ಸಮಸ್ಯೆ ಮತ್ತು ಬಂಜೆತನ ಹೋಗಲಾಡಿಸಲು ಚಿಕಿತ್ಸೆ ನೀಡಲಾಗುತ್ತದೆ. ಸೂಕ್ತ ಚಿಕಿತ್ಸಾ ವಿಧಾನದ ಮೂಲಕ ಮಹಿಳೆಯರು ಮತ್ತು ಪುರುಷರಲ್ಲಿನ ಬಂಜೆತನ ನಿವಾರಿಸಲಾಗುತ್ತದೆ. ಮೂತ್ರ ಪಿಂಡದಲ್ಲಿನ ಕಲ್ಲಿಗೂ ಚಿಕಿತ್ಸೆ ಲಭ್ಯ ನಗರದ ಉದ್ಯೋಗಸ್ಥರು ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ದೇಹಕ್ಕೆ ಅಗತ್ಯವಿರುವ ಪ್ರಮಾಣಕ್ಕಿಂತ ಕಡಿಮೆ ನೀರನ್ನು ಕುಡಿಯುತ್ತಿದ್ದು ಮೂತ್ರಪಿಂಡದಲ್ಲಿ ಕಲ್ಲುಸೃಷ್ಟಿಯಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಹೋಮಿಯೋಪತಿ ಚಿಕಿತ್ಸೆಯಲ್ಲಿ ಅತ್ಯಂತ ಸರಳ ವಿಧಾನದಲ್ಲಿ ಮೂತ್ರಪಿಂಡದಲ್ಲಿರುವ ಕಲ್ಲನ್ನು ಕರಗಿಸಲಾಗುವುದು ಎಂದು ಡಾ.ಶ್ರೀಕಾಂತ್ ಹೂಗಾರ್ ಹೇಳುತ್ತಾರೆ. ಮೂತ್ರ ಪಿಂಡದಲ್ಲಿನ ಕ್ರಿಯೆಟಿನ್ ಸಮತೋಲನ ಹಾಗೂ ಮೂತ್ರ ನಾಳ ಸೋಂಕಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಯಶಸ್ವಿ ಚಿಕಿತ್ಸೆ ನೀಡಿರುವುದಾಗಿ ಡಾ.ಶ್ರೀಕಾಂತ್ ಹೇಳುತ್ತಾರೆ. ಇನ್ನೂ ಬೆಂಗಳೂರಿನ ಬಿಟಿಎಂ ಎರಡನೇ ಹಂತದ ಮೈಕೋಲೇಔಟ್ ಬಡಾವಣೆಯಲ್ಲಿರುವ ನಂದಿ ಹೋಮಿಯೋಪತಿ ಕೇಂದ್ರದಲ್ಲಿ (Homeopathy Center ) ತಜ್ಞೆ ವೈದ್ಯೆ ಡಾ.ಸರಿತಾ ಹಲವಾರು ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದಾರೆ. ಮಕ್ಕಳ ನೆಗಡಿ, ಶೀತ, ಕೆಮ್ಮಿಗೆ ಪರಿಹಾರ ಮಳೆಗಾಲ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ವೈರಸ್ ಸೋಂಕಿನಿಂದ ಶಾಲಾಮಕ್ಕಳು, ಪೋಷಕರು, ಉದ್ಯೋಗಸ್ಥರು ಹಾಗೂ ಜನ ಸಾಮಾನ್ಯರು ನೆಗಡಿ, ಶೀತ, ಕೆಮ್ಮು, ಜ್ವರ, ತಲೆನೋವು, ಮೈಕೈನೋವು ಸೇರಿದಂತೆ ಹಲವು ಹತ್ತು ಬಗೆಯ ವೈರಾಣು ಕಾಯಿಲೆಗಳಿಂದ ತೊಂದರೆಗೀಡಾಗುತ್ತಾರೆ. ತಕ್ಷಣ ಚಿಕಿತ್ಸೆ ಪಡೆಯುವ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗು ತ್ವರಿತವಾಗಿ ವೈರಾಣು ಸೋಂಕಿನಿಂದ ಗುಣಮುಖರಾಗಬಹುದು ಎಂದು ಡಾ.ಸರಿತಾ ಸಲಹೆ ನೀಡಿದ್ದಾರೆ. ಇನ್ನೂ ಮಹಿಳೆಯರಲ್ಲಿ ಕಂಡು ಬರುವ ಹಾರ್ಮೋನ್ ಗಳ ವ್ಯತ್ಯಾಸವನ್ನು ಮೂರರಿಂದ ಆರು ತಿಂಗಳೊಳಗೆ ಸರಿದಾರಿಗೆ ತರುವುದಾಗಿ ಹಾಗು ಶಾಶ್ವತವಾಗಿ ಪರಿಹಾರ ದೊರಕಿಸಿಕೊಡುವುದಾಗಿ ಹೇಳುತ್ತಾರೆ. ಸೊರಿಯಾಸಿಸ್ ಗೂ ಚಿಕಿತ್ಸೆ ಲಭ್ಯ ನಂದಿ ಹೋಮಿಯೋಪತಿಯಲ್ಲಿ ಸೋರಿಯಾಸಿಸ್ ಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಸೋರಿಯಾಸಿಸ್ ಕೇವಲ ಚರ್ಮದ ಕಾಯಿಲೆಯಲ್ಲ. ಸೋರಿಯಾಸಿಸ್ ನಲ್ಲಿ ವಿವಿಧ ವಿಧಗಳಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಅಸಮರ್ಪಕ ಕಾರ್ಯದಿಂದ ಉಂಟಾಗುತ್ತದೆ. ಅನುವಂಶಿಕತೆಯಿಂದಲೂ ಬರುತ್ತದೆ. ಎಷ್ಟೋಮಂದಿ ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಅವರ ಕಾಯಿಲೆ ಗುಣಪಡಿಸಿ ಆತ್ಮವಿಶ್ವಾಸದಿಂದ ಬದುಕಲು ನಂದಿ ಹೋಮಿಯೋಪತಿ ನೆರವಾಗುತ್ತಿದೆ. ಅನುವಂಶಿಕ ಕಾಯಿಲೆಗಳ ಅಧ್ಯಯನ ಮಾಡಿ ಚಿಕಿತ್ಸೆ ರೋಗಿಗಳ ಹಿಂದಿನ ವೈದ್ಯಕೀಯ ವರದಿಗಳು ಹಾಗೂ ಅನುವಂಶಿಕ ಕಾಯಿಲೆಗಳ ಸಂಪೂರ್ಣ ವಿವರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗುವುದು. ರೋಗಲಕ್ಷಣ ಮತ್ತು ರೋಗಿಯ ಮಾನಸಿಕ ಹಾಗು ದೈಹಿಕಸ್ಥಿತಿ ಅಧ್ಯಯನ ಮಾಡಿ ಔಷದಿಗಳ ಕಾಂಪೋಸಿಶನ್ ಸಿದ್ದಪಡಿಸಿ ಯಾವುದೇ ರೀತಿಯ ಅಡ್ಡಪರಿಣಾಮಗಳಾಗದಂತ ಚಿಕಿತ್ಸೆ ನೀಡುವಲ್ಲಿ ನಂದಿ ಹೋಮಿಯೋಪತಿ ಹೆಸರುವಾಸಿಯಾಗಿದೆ. ಪ್ರಚಲಿತ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುತೇಕ ಸೌಂದರ್ಯ ವರ್ಧಕಗಳಿಗೆ ಸಮನಾದ ಸೌಂದರ್ಯ ವರ್ಧಕಗಳು ಹೋಮಿಯೋಪತಿ ಕೇಂದ್ರದಲ್ಲಿ ಲಭ್ಯವಿದ್ದು ಜನಸಾಮಾನ್ಯರು ಬಳಸಬಹುದಾಗಿದೆ ಎಂದಿದ್ದಾರೆ. ಇದೇ ನಂದಿ ಹೋಮಿಯೋಪತಿಗೆ (Nandi Homeopathy) ಭೇಟಿ ನೀಡಿ ನಂದಿ ಹೋಮಿಯೋಪತಿ, ನಂ.89/1, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು-04, ಪೋನ್: 080-26603328, 9886920678. ನಂದಿ ಹೋಮಿಯೋಪತಿ, ನಂ.381, 7ನೇ ಕ್ರಾಸ್, 2ನೇ ಹಂತ, ಬಿಟಿಎಂ ಲೇಔಟ್, ಬೆಂಗಳೂರು-76, ಪೋನ್: 080-42161666, 9886920789 ವೈದ್ಯರಿಂದ ಚಿಕಿತ್ಸೆಯ ಬಗ್ಗೆ ಮಾಹಿತಿಗಾಗಿ ನೇರವಾಗಿ ಸಂಪರ್ಕಿಸಿ ಶಿವಾನಂದ ಹೂಗಾರ್, ನಂದಿ ಹೋಮಿಯೋಪತಿ, ಗಾಂಧಿ ಬಜಾರ್, ಬಿಟಿಎಂ ಲೇಔಟ್, ಮೊಬೈಲ್: 9886920723, 9886920889. ಇದಲ್ಲದೇ www.nandihomeopathy.com ಈ ಜಾಲತಾಣಕ್ಕೂ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.